N.C.S.L. ಶಾಲಾ ನಾಯಕತ್ವ ರಾಷ್ಟ್ರೀಯ ಕೇಂದ್ರ ಘಟಕವು 2012 ರಲ್ಲಿ N.I.E.P.A. ನಲ್ಲಿ ದೇಶದ ಶಾಲೆಗಳ ರೂಪಾಂತರಕ್ಕೆ ಸ್ಥಾಪಿಸಲಾಯಿತು. ಇದು ಶಾಲೆಗಳನ್ನು ಪರಿವರ್ತಿಸುವ ಪ್ರಮುಖ ಗುರಿ ಈಡೇರಿಕೆಯ ಉದ್ದೇಶಕ್ಕಾಗಿ ಮತ್ತು ಸಂದರ್ಭೋಚಿತ ಶಾಲಾ ಸಮಸ್ಯೆಗಳ ಪರಿಹಾರದ ಉದ್ದೇಶಕ್ಕಾಗಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, 679 ಜಿಲ್ಲೆಗಳು ಮತ್ತು 6500 ಬ್ಲಾಕ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯವಾಗಿ ಕೇಂದ್ರದ ಎಲ್ಲಾ ಚಟುವಟಿಕೆಗಳು ಪ್ರತಿ ರಾಜ್ಯ/ಯುಟಿಯಲ್ಲಿನ ಪ್ರತಿ ಶಾಲೆಯ ಪರಿವರ್ತಕ ಕಾರ್ಯಸೂಚಿಯನ್ನು ಅನುಸರಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಅಷ್ಟೇ ಅಲ್ಲದೇ ಕೇಂದ್ರವು ವಿಶೇಷವಾದ ಮತ್ತು ಕಾರ್ಯಸಾಧ್ಯ ನಾಯಕತ್ವ ಮಾದರಿಗಳ ವಿಕಾಸದ ಕಡೆಗೆ ಕಾರ್ಯನಿರ್ವಹಿಸುವ ಬಗ್ಗೆಯೂ ಗಮನ ಹರಿಸುತ್ತದೆ.

ದೇಶದ ಪ್ರತೀ ಶಾಲೆಯೂ ಉತ್ಕೃಷ್ಟವಾಗಿದ್ದು, ಪ್ರತಿ ಮಗುವಿಗೆ ಉತ್ತಮ ಕಲಿಕೆಯ ಖಾತರಿ ನೀಡುವ ಧ್ಯೇಯ ಕೇಂದ್ರದ್ದಾಗಿದೆ. ಧ್ಯೇಯವನ್ನು ಸಾಧಿಸಲು, ಕೇಂದ್ರವು ಶಾಲೆಯ ನಾಯಕತ್ವ ಅಭಿವೃದ್ಧಿಯ ಕಾರ್ಯಾಚರಣೆಯ ಚಟುವಟಿಕೆಗಳನ್ನು ಪಠ್ಯಕ್ರಮ ಮತ್ತು ವಾಸ್ತವಿಕ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ನೆಟ್ವರ್ಕ ಮತ್ತು ಸಾಂಸ್ಥಿಕ ಯೋಜನೆ, ಸಂಶೋಧನೆ ಮತ್ತು ಅಭಿವೃದ್ಧಿ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿದೆ.

ಇದುವರೆಗಿನ ಸಾಮಾನ್ಯ, ಅಲ್ಪಾವಧಿಯ ಶಾಲಾ ನಾಯಕತ್ವದ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ನಿರಂತರ ಮತ್ತು ದೀರ್ಘಾವಧಿಯ ನಾಯಕತ್ವ ಅಭಿವೃದ್ಧಿ ಖಾತ್ರಿ ಪಡಿಸುವ ಚಟುವಟಿಕೆಗಳ ಕಾರ್ಯಕ್ರಮವನ್ನು ಶಾಲಾ ಮುಖ್ಯಸ್ಥರು ಮತ್ತು ಸಂಸ್ಥಾ ನಿರ್ವಾಹಕರ ಅಭಿವೃದ್ಧಿಗಾಗಿ ಕೇಂದ್ರವು ವಿನ್ಯಾಸಗೊಳಿಸಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಶಾಲಾ ನಾಯಕತ್ವ ಅಭಿವೃದ್ಧಿಯ ಕಾರ್ಯಕ್ರಮದ ವಿನ್ಯಾಸ ಮತ್ತು ಪಠ್ಯಕ್ರಮದ ಚೌಕಟ್ಟನ್ನು ರಾಷ್ಟ್ರೀಯ ಮಟ್ಟದಲ್ಲಿ ಯೋಜಿಸಲಾಗಿದೆ. ಇಡೀ ಕಾರ್ಯಕ್ರಮವು ಸಾಧಕನ ಕೇಂದ್ರಿತವಾಗಿದ್ದು, ರಾಜ್ಯಗಳಲ್ಲಿನ ಶಾಲೆಗಳ ಅಗತ್ಯತೆಗಳು ಮತ್ತು ಸಂದರ್ಭೋಚಿತ ವಿಷಯ ಆಧಾರಿತ ಪಠ್ಯಕ್ರಮ ಮತ್ತು ಪಠ್ಯಕ್ರಮದ ಚೌಕಟ್ಟಿನೊಳಗೆ ವೈವಿಧ್ಯತೆಯನ್ನು ಒಳಗೊಂಡಿದೆ. ಪಠ್ಯಕ್ರಮದ ಚೌಕಟ್ಟಿನೊಳಗೆ ಇಂದಿನ ಶಾಲೆಗಳನ್ನು ಪರಿವರ್ತಿಸಲು ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವುಳ್ಳ ನಿರೀಕ್ಷಿತ ನಾಯಕರನ್ನು ತಯಾರಿಸಲು ಪ್ರಸ್ತುತ  ಶಾಲೆಗಳ ಮುಖ್ಯಸ್ಥರನ್ನು ಸಜ್ಜುಗೊಳಿಸುವ ಶಾಲಾ ನಾಯಕತ್ವ ಅಭಿವೃದ್ಧಿಯ ಕೈಪಿಡಿ ರಚಿಸಲಾಗಿದ್ದು, ಅದು ಶ್ರೀಮಂತ ಸಂಪನ್ಮೂಲ ಮತ್ತು ಆಕರ ಕೈಪಿಡಿಯಾಗಿದೆ.