ಭಾರತವು ಶಾಲಾ ಸೌಲಭ್ಯಗಳನ್ನು ಒದಗಿಸುವಲ್ಲಿ, ಪ್ರವೇಶವನ್ನು ವಿಸ್ತರಿಸುವಲ್ಲಿ ಮತ್ತು ಹೆಚ್ಚಿಸುವಲ್ಲಿ, ಶಾಲೆಗಳಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ. ಆದಾಗ್ಯೂ, ಪ್ರಯತ್ನಗಳು ಕಲಿಕಾ ಫಲಗಳ ಸುಧಾರಣೆಯಾಗಿ ಬದಲಾಗಿಲ್ಲ. ಪ್ರಾಥಮಿಕ ಹಂತದಿಂದಲೂ ವಿದ್ಯಾರ್ಥಿಗಳ ಕಲಿಕೆಯಲ್ಲಿ ದೊಡ್ಡ ಮಟ್ಟದ ಅಸಮಾನತೆಗಳಿವೆ. ಆದ್ದರಿಂದ ಇಂದು ಶಾಲೆಯ ಕಡೆಗಿದ್ದ ಗಮನವನ್ನು ಬದಲಾಯಿಸಿ ಕಲಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದೆ. ಒಂದೇ ರೀತಿಯ ಸಂಪನ್ಮೂಲಗಳನ್ನು ಹೊಂದಿರುವ ಶಾಲೆಗಳೂ ಕೂಡಾ ಭಿನ್ನವಾದ ಕಲಿಕಾ ಫಲಿತಾಂಶ ನೀಡುತ್ತಿವೆ. ಶಾಲೆಗಳ ಪರಿಣಾಮಕಾರಿ ನಿರ್ವಹಣೆಯಿದ್ದೂ ಕಡಿಮೆ ಮಟ್ಟದ ಕಲಿಕಾ ಫಲಿತಾಂಶ ಮತ್ತು ಶಾಲೆಗಳು ಕಳಪೆ ಗುಣಮಟ್ಟ ಹೊಂದಲು ಕಾರಣವೇನು ಎಂಬುದನ್ನು ಹುಡುಕುವ ಪ್ರಯತ್ನ ಇದಾಗಿದೆ

ಪರಿಣಾಮಕಾರಿ ಶಾಲಾ ನಾಯಕತ್ವವು ಸಂಪನ್ಮೂಲ ಬಳಕೆಯಲ್ಲಿ ದಕ್ಷತೆಯನ್ನು ಸುಧಾರಿಸುತ್ತದೆ, ಬೋಧನಾ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಕಲಿಯುವವರ ಸಾಧನೆಯನ್ನು ಹೆಚ್ಚಿಸುತ್ತದೆ. M.H.R.D. ನಿರ್ದೇಶನದಲ್ಲಿ N.I.E.P.A.ಪ್ರತಿ ಶಾಲೆಯು ಉತ್ಕೃಷ್ಟವಾಗಿದೆ ಮತ್ತು ಪ್ರತಿ ಮಗು ಕಲಿಯುತ್ತದೆಎಂಬ ಮುಖ್ಯ ಉದ್ದೇಶದೊಂದಿಗೆ ರಾಷ್ಟ್ರೀಯ ಶಾಲಾ ನಾಯಕತ್ವ ಕೇಂದ್ರ (N.C.S.L)ವನ್ನು ಸ್ಥಾಪಿಸಿತು. ಭಾರತದಲ್ಲಿ ಹೊಸ ತಲೆಮಾರಿನ ಶಾಲಾ ನಾಯಕರನ್ನು ಬೆಳೆಸಲು ಕೇಂದ್ರವು ಶಾಲಾ ನಾಯಕತ್ವ ಅಭಿವೃದ್ಧಿಗೆ ಒಂದು ಚೌಕಟ್ಟು ಮತ್ತು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿತು. ಶಾಲಾ ನಾಯಕತ್ವ  ಅಭಿವೃದ್ಧಿ (S.L.D.P.) ಕಾರ್ಯಕ್ರಮಗಳು ಶಾಲೆಗಳನ್ನು ಉತ್ಕೃಷ್ಟ ಕೇಂದ್ರಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ.

           ಐದು ವರ್ಷಗಳ ಕಡಿಮೆ ಅವಧಿಯಲ್ಲಿ ಕೇಂದ್ರವು ನಿರ್ದಿಷ್ಟವಾಗಿ ಎಲ್ಲಾ ಹಂತದ ಶಾಲಾ ಶಿಕ್ಷಣದ ಶಾಲಾ ಮುಖ್ಯಸ್ಥರನ್ನು ಗುರಿಯಾಗಿರಿಸಿಕೊಂಡು, ವಿಶೇಷ ಮುಖಾಮುಖಿ S.L.D.P. ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿತು. ಕೇಂದ್ರವು ದೇಶದ ಪ್ರತಿಯೊಂದು ಶಾಲೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಶಾಲಾ ನಾಯಕತ್ವ ಮತ್ತು ನಿರ್ವಹಣೆ ಕುರಿತು ಆನ್ಲೈನ್ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಆನ್ಲೈನ್ ಕಾರ್ಯಕ್ರಮವು MOODLE ಪ್ಲಾಟ್ಫಾರಂ ಮೂಲಕ ಕಾರ್ಯನಿರ್ವಹಿಸುವುದರೊಂದಿಗೆ ಕೇಂದ್ರವು ಪರಿಕಲ್ಪಿಸಿದ ಶಾಲಾ ನಾಯಕತ್ವ ಅಭಿವೃದ್ಧಿ ಪಠ್ಯಕ್ರಮ ಚೌಕಟ್ಟಿನ ಆಧಾರವಾಗಿ ವಿನ್ಯಾಸಗೊಳಿಸಲಾಗಿದೆ. ಕೋರ್ಸ್ನ್ನು ನಾಲ್ಕು ವಿಭಾಗಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಅವುಗಳು ಕೆಳಗಿನಂತಿವೆ.

  1. ಓದುವ ವಸ್ತು ಅಥವಾ ಮಾಡ್ಯೂಲ್ಗಳ ರೂಪದಲ್ಲಿ -ವಿಷಯ

  2. ಪವರ್ ಪಾಯಿಂಟ್ ಪ್ರಸ್ತುತಿಗಳು, ಕೇಸ್ ಸ್ಟಡೀಸ್, ಆಡಿಯೊಗಳು, ವೀಡಿಯೊಗಳು ಮತ್ತು ಇತರ ರೀತಿಯ ಸಂಪನ್ಮೂಲಗಳು.

  3. ರೂಢಿ ಅಭ್ಯಾಸ, ಚಟುವಟಿಕೆಗಳೊಂದಿಗೆ ಸ್ವಯಂ ಕಲಿಕಾ ವಸ್ತು

  4.  ಬಹು ಆಯ್ಕೆ ಪ್ರಶ್ನೆಗಳು, ದತ್ತ ಕಾರ್ಯ ಯೋಜನೆಗಳು, ರೂಢಿ ಅಭ್ಯಾಸ, ಚರ್ಚಾ ವೇದಿಕೆಗಳು ಮತ್ತು ಕೃತಿ ಸಂಪುಟಗಳೊಂದಿಗೆ ಮೌಲ್ಯಮಾಪನ.

     ಪ್ರಮುಖ ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಿದ S.L.D.P. ಕಾರ್ಯಕ್ರಮಗಳು ಮತ್ತು ಶಾಲೆಯ ಮುಖ್ಯಸ್ಥರನ್ನು ತಾಂತ್ರಿಕವಾಗಿ ಪ್ರಗತಿ ಸಾಧಿಸುವಲ್ಲಿ, ಅವರ ಶಾಲೆಗಳನ್ನು ಕಲಿಕೆಯ ಕೇಂದ್ರವಾಗಿ ಪರಿವರ್ತಿಸುವಲ್ಲಿ ಉಪಕ್ರಮ ಕೈಗೊಂಡಿದ್ದ N.C.S.L. ತಂಡವನ್ನು ನಾನು ಅಭಿನಂದಿಸುತ್ತೇನೆ.

 

 ಡಾ.ಎನ್.ವಿ.ವರ್ಗೀಸ್