ಪ್ರಾರಂಭವಾದ ದಿನದಿಂದಲೇ, ಶಾಲಾ ಮುಖ್ಯಸ್ಥರ ನಾಯಕತ್ವದ ಸಾಮರ್ಥ್ಯ ಬೆಳೆಸಲು ಮತ್ತು ಅವರು ಸ್ವತಃ ‘ಇವು ನನ್ನ ಸಾಮರ್ಥ್ಯಗಳು’, ‘ನನ್ನ ಶಾಲೆ’, ‘ನನ್ನ ಶಾಲೆಯನ್ನು ಬದಲಾಯಿಸಲು ಮತ್ತು ರೂಪಾಂತರಗೊಳ್ಳಲು ಇದನ್ನೇ ಮಾಡಬೇಕು’ ಎಂಬ ಭಾವನೆಗಳನ್ನು ಬೆಳೆಸಲು N.I.E.P.A.ಯಲ್ಲಿ ಶಾಲಾ ನಾಯಕತ್ವದ ರಾಷ್ಟ್ರೀಯ ಕೇಂದ್ರ ಬದ್ಧವಾಗಿದೆ. ಇಂದು ನಾವು N.C.S.L. ನಿಂದ ಪರಿಕಲ್ಪಿಸಲ್ಪಟ್ಟ ಶಾಲಾ ನಾಯಕತ್ವ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ದೇಶದ ಉದ್ದ ಮತ್ತು ಅಗಲಗಳಲ್ಲಿ N.I.E.P.A.
ಯಿಂದ ಕಾರ್ಯಗತಗೊಳಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಘಟ್ಟದಲ್ಲಿ ಇಂದು ನಾವಿದ್ದೇವೆ. ಈ ಪ್ರಯತ್ನದಲ್ಲಿ ರಾಜ್ಯ/ಯುಟಿ ಸರ್ಕಾರಗಳ ಸಹಯೋಗ ಹೆಚ್ಚು ಶ್ಲಾಘನೆಗೆ ಪಾತ್ರವಾಗಿವೆ. ನಮ್ಮೊಂದಿಗೆ ನಿಕಟ ಸಂಬಂಧ ಹೊಂದಿರುವ ನಮ್ಮ ರಾಜ್ಯ ಸಂಪನ್ಮೂಲ ಗುಂಪಿನ ಸದಸ್ಯರು ಮತ್ತು ಶಾಲಾ ಮುಖ್ಯಸ್ಥರಿಂದ ತೋರಿಸಲಾಗುತ್ತಿರುವ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮಗಳೆಡೆಗಿನ ಉತ್ಸಾಹಕ್ಕೆ ಸಾಟಿಯಿಲ್ಲ.
ಕೇಂದ್ರವು ಪ್ರಾರಂಭಿಸಿದ ಶಾಲಾ ನಾಯಕತ್ವ ಅಭಿವೃದ್ಧಿಯ ಹಲವಾರು ಕಾರ್ಯಕ್ರಮಗಳಲ್ಲಿ, ಶಾಲಾ ನಾಯಕತ್ವ ಮತ್ತು ನಿರ್ವಹಣೆಯ ಆನ್ಲೈನ್ ಕಾರ್ಯಕ್ರಮವೂ ಒಂದಾಗಿದೆ. ಈ ಕಾರ್ಯಕ್ರಮವು ಶಾಲಾ ನಾಯಕತ್ವ ಬೆಳವಣಿಗೆಯ ಪಠ್ಯಕ್ರಮ ಚೌಕಟ್ಟಿನ ಆಧಾರಿತವಾಗಿ ರಾಷ್ಟ್ರ ಮಟ್ಟದಲ್ಲಿ ಸಂಯೋಜಿಸಲ್ಪಟ್ಟರೂ ನೈಜ ಶಾಲಾ ಪರಿಸರದಲ್ಲಿ ಪ್ರಯೋಗಗೊಂಡ ಸಂದರ್ಭೋಚಿತ ನಾಯಕತ್ವದ ಸಮಸ್ಯೆಗಳನ್ನು ಪರಿಹರಿಸುವ ವಿಧಾನ ತೋರಿಸುತ್ತದೆ. ಇದು ಸಾಧಕನ ಕೇಂದ್ರಿತ ಕಾರ್ಯಕ್ರಮವಾಗಿದ್ದು, ಶಾಲಾ ಮುಖ್ಯಸ್ಥರನ್ನು ಶಾಲಾ ಸುಧಾರಣಾ ಮತ್ತು ಪ್ರಗತಿಯ ಹರಿಕಾರನಂತೆ ಮುನ್ನೆಲೆಗೆ ತರುತ್ತದೆ. ಆದ್ದರಿಂದ ಈ ಕಾರ್ಯಕ್ರಮವು ನಿರ್ದಿಷ್ಟವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ತರಬೇತಿಗಾಗಿಯೇ ವಿನ್ಯಾಸಗೊಳಿಸಲ್ಪಟ್ಟಿದೆ. ಈ ಕಾರ್ಯಕ್ರಮವು ಸ್ವಯಂ-ಅಭಿವೃದ್ಧಿಯಿಂದ ಹಿಡಿದು ಶಾಲಾ-ಆಧಾರಿತ ಬದಲಾವಣೆ ಮತ್ತು ನಾವೀನ್ಯತೆಗಳನ್ನು ಉಳಿಸಿಕೊಳ್ಳುವ ಕುರಿತು ವ್ಯಾಪಕ ಸುಧಾರಣೆ ನೀಡುತ್ತದೆ.
N.C.S.L.ಇದು M.H.R.D. ಆದೇಶದ ಮೇರೆಗೆ ಮೂಡಲ್ ಪ್ಲಾಟ್ಫಾರಂ ಮೂಲಕ ಆನ್ಲೈನ್ ಜಗತ್ತಿನಲ್ಲಿ ಪ್ರವೇಶಿಸುವ ಸವಾಲನ್ನು ಸ್ವೀಕರಿಸಿತು. ‘ನಾವೂ ಸಾಧಿಸಬಹುದು’ ಎಂಬ ಮನೋಭಾವವನ್ನು ಹುಟ್ಟುಹಾಕಿದ್ದಕ್ಕಾಗಿ ನಾವು M.H.R.D. ಗೆ ಕೃತಜ್ಞ ರಾಗಿರುತ್ತೇವೆ. ಅಂದಿನಿಂದ N.C.S.L.ನ ಪ್ರತಿಯೊಬ್ಬ ಸದಸ್ಯರು ಇ-ವಿಷಯ ವಿನ್ಯಾಸಗೊಳಿಸುವುದು, ಆಕರ ಗ್ರಂಥಗಳ ಕ್ರೋಢೀಕರಣ, ರೂಢಿ ಅಭ್ಯಾಸ ಚಟುವಟಿಕೆಗಳ ಸಿದ್ಧಪಡಿಸುವಿಕೆ, ಮೌಲ್ಯಮಾಪನ, ದತ್ತ ಕಾರ್ಯ ಯೋಜನೆ, ಆಡಿಯೋ- ವೀಡಿಯೋ ಲಿಂಕ್ ಗಳನ್ನು ವಿನ್ಯಾಸಗೊಳಿಸಲು ದಣಿವಿನ ಅರಿವಿಲ್ಲದೆ ಕೆಲಸ ಮಾಡಿದ್ದಾರೆ. ನಮ್ಮ ಕನಸನ್ನು ನನಸು ಮಾಡಿದ N.C.S.L.ನ ತಂಡದ ಸದಸ್ಯರು, N.I.E.P.A. ಯ ಸದಸ್ಯರು ಮತ್ತು ಉಪಕುಲಪತಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿದ ವಿಶ್ವವಿದ್ಯಾಲಯದ ತಾಂತ್ರಿಕ ತಜ್ಞರುಗಳಿಗೆ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.
N.C.S.L., N.I.E.P.A. ಗಳು ರಾಜ್ಯ ಸರ್ಕಾರ/ಯುಟಿ ಮತ್ತು ರಾಜ್ಯ ಸಂಪನ್ಮೂಲ ತಂಡಗಳಿಂದ ಶಾಲಾ ಮುಖ್ಯಸ್ಥರನ್ನು ಕಾರ್ಯಕ್ರಮದ ಕೊನೆಯ ಮೈಲಿಗಲ್ಲನ್ನು ಯಶಸ್ವಿಯಾಗಿ ಮುಟ್ಟಿಸುವಲ್ಲಿನ ಸಹಕಾರವನ್ನು ಎದುರು ನೋಡುತ್ತಿದೆ. ಈ ದೇಶದಲ್ಲಿನ ಪ್ರತಿ ಶಾಲೆಯ ಮುಖ್ಯಸ್ಥರು ಈ ಕಾರ್ಯಕ್ರಮದಿಂದ ಗರಿಷ್ಠ ಲಾಭ ಪಡೆದು, ಶಾಲೆಯ ಬದಲಾವಣೆ ಮತ್ತು ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿ ಎಂದು ನಾನು ಬಯಸುತ್ತೇನೆ. “ಪ್ರತಿ ಮಗು ಕಲಿಯುತ್ತದೆ ಮತ್ತು ಪ್ರತೀ ಶಾಲೆ ಹೊಳೆಯುತ್ತದೆ” ಎಂಬ ಈ ಪ್ರಯಾಣದಲ್ಲಿ ನಮ್ಮ ಕೈ ಜೋಡಿಸೋಣ.
ಪ್ರೋ. ರಶ್ಮಿ ದಿವಾನ್