ಪ್ರೊ.ರಶ್ಮಿ ದಿವಾನ್ ಇವರು ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ, ದೆಹಲಿಯಲ್ಲಿನ ರಾಷ್ಟ್ರೀಯ ಶಾಲಾ ನಾಯಕತ್ವ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ಕಳೆದ 30 ವರ್ಷಗಳಿಂದ ಅವರ ಸಂಶೋಧನಾ ಕಾರ್ಯವು ಮುಖ್ಯವಾಗಿ ಶಾಲಾ ಶಿಕ್ಷಣ, ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವದ ನಿರ್ಣಾಯಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಪ್ರಾಯೋಗಿಕ ಸಂಶೋಧನೆಯ ಬಲವಾದ ಅಡಿಪಾಯದೊಂದಿಗೆ ಶಾಲಾ ನಿರ್ವಹಕರು ಮತ್ತು ಶಾಲಾ ನಾಯಕರ ಪ್ರಸ್ತುತ ಮತ್ತು ನಿರೀಕ್ಷಿತ ಶೈಕ್ಷಣಿಕ ಸಾಮರ್ಥ್ಯ ವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತ ಕಾಲಿಕೆಗಳಲ್ಲಿ ಅವರ ಪ್ರಕಟಿತ ಬರಹಗಳು ಪ್ರಮುಖವಾಗಿ ಶಾಲಾ ನಿರ್ವಹಣೆ ಮತ್ತು ನಾಯಕತ್ವದ ಕುರಿತಾದ ಲೇಖನಗಳಾಗಿದ್ದು, ಇವು ಗತಿಶೀಲ ಶಾಲಾ ನಾಯಕತ್ವ, ಶಾಲಾ ಸುಧಾರಣೆಗಾಗಿ ಶಾಲಾ ನಾಯಕರ ತಂತ್ರ, ಶಾಲಾ ಸುಧಾರಣೆಗೆ ನಾಯಕತ್ವ ಬೆಳವಣಿಗೆ, ಶಾಲಾ ಬದಲಾವಣೆ ಮತ್ತು ಪ್ರಗತಿಗೆ ಪ್ರಾಂಶುಪಾಲರು ವೇಗವರ್ಧಕರಂತೆ ಕಾರ್ಯನಿರ್ವಹಿಸುವ ಅಂಶಗಳು, ಶಾಲಾ ಪ್ರಾಂಶುಪಾಲರಲ್ಲಿ ನಾಯಕತ್ವ ವರ್ತನೆ ಮತ್ತು ಮೌಲ್ಯದ ಮಾದರಿಗಳು, ಆರ್.ಟಿ.. ಅಡಿಯಲ್ಲಿ ಶಾಲಾ ನಾಯಕತ್ವ, ಮ್ಯಾಪಿಂಗ್ ಬದಲಾವಣೆ ಮತ್ತು ಸವಾಲುಗಳು, ನಾಯಕತ್ವ ಸ್ಥಾನಗಳಲ್ಲಿ ಮಹಿಳೆಯರಿಗೆ ನೀತಿ ನಿರ್ದೇಶನಗಳು, ಬಹು ವರ್ಗದ ಶಾಲೆಗಳ ನಿರ್ವಹಣೆ ಮತ್ತು ಮುನ್ನೆಡೆಸುವಿಕೆ, ಶಾಲಾ ಆಧಾರಿತ ನಿರ್ವಹಣೆ ಮತ್ತು ಮೇಲ್ವಿಚಾರಣೆ, ಪ್ರಾಥಮಿಕ ಶಿಕ್ಷಣ ಸಬಲೀಕರಣದಲ್ಲಿ ಮತ್ತು ಶಾಲೆಗಳನ್ನು ಕಲಿಕಾ ಸಂಸ್ಥೆಗಳಾಗಿ ಸ್ಥಿತಿ ಸ್ಥಾಪಕತೆ ಮೂಡಿಸುವಲ್ಲಿ ಸಮುದಾಯದ ಭಾಗವಹಿಸುವಿಕೆಯ ಕುರಿತಾಗಿದೆ.

ಡಾ.ಸುನೀತಾ ಚುಗ್ ಇವರು ಅಂತರಾಷ್ಟ್ರೀಯ ರಾಜಕೀಯದಲ್ಲಿ ತಮ್ಮ ಎಂ.. ಮತ್ತು ಎಂ.ಫಿಲ್ಗಳನ್ನು ಜವಾಹರಲಾಲ ನೆಹರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಇವರು ಪ್ರಸ್ತುತ N.I.E.P.A.ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಆಸಕ್ತಿಯ ಕ್ಷೇತ್ರ ನಗರದಲ್ಲಿನ ಅವಕಾಶ ವಂಚಿತ ಮಕ್ಕಳ ಶಿಕ್ಷಣ, ಅಂತರ್ಗತ ಶಿಕ್ಷಣ, ಆರ್.ಟಿ.. ಮತ್ತು ಅದರ ಅನುಷ್ಠಾನ ಮತ್ತು ಶಾಲಾ ನಾಯಕತ್ವಗಳನ್ನು ಒಳಗೊಂಡಿದೆ. ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಸಮಸ್ಯೆಗಳ ಕುರಿತ ಲೇಖನಗಳ ಪುಸ್ತಕಗಳನ್ನು ಬರೆದಿದ್ದಾರೆ. ನಗರ ಅಂಚಿನಲ್ಲಿರುವ ಮಕ್ಕಳ ಭಾಗವಹಿಸುವಿಕೆ ಮತ್ತು ಕಲಿಕಾ ಸಾಧನೆ ಕುರಿತು ಸಂಶೋಧನಾ ಯೋಜನೆಗಳನ್ನು ಕೈಗೊಂಡಿದ್ದಾರೆ. ಜೆರುಸೆಲಂನಲ್ಲಿ ನಡೆದ  ಅಂತರ್ಗತ ಶಿಕ್ಷಣ ಮತ್ತು ನಾಟಿಂಗ್ ಹ್ಯಾಂನಲ್ಲಿ ನಡೆದ ಶಾಲಾ ನಾಯಕತ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ದೆಹಲಿ, ಪಂಜಾಬ್, ಮಧ್ಯಪ್ರದೇಶ, ಚತ್ತೀಸಗಡ, ಪಶ್ಚಿಮ ಬಂಗಾಳ ಮತ್ತು ಮಿಜೋರಾಂನಲ್ಲಿನ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮವನ್ನು ಸಕ್ರೀಯವಾಗಿ ಮುನ್ನೆಡೆಸುತ್ತಿದ್ದಾರೆ.

ಡಾ ಕಶ್ಯಪಿ ಅವಸ್ಥಿ ಇವರು N.I.E.P.A.ನಲ್ಲಿನ ರಾಷ್ಟ್ರೀಯ ಶಾಲಾ ನಾಯಕತ್ವ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಇವರು ಶಾಲಾ ನಾಯಕತ್ವ ಅಭಿವೃದ್ಧಿ ಕುರಿತಾದ ಪಠ್ಯಕ್ರಮ ಮತ್ತು ಕೈಪಿಡಿಯ ರಚನೆಯಲ್ಲಿ ಸಕ್ರೀಯವಾಗಿ ತಂಡದೊಂದಿಗೆ ತೊಡಗಿಸಿಕೊಂಡಿದ್ದಾರೆ. ಇವರು ಎಂ.ಫಿಲ್. ಮಾಡುವವರಿಗೆ ಬೋಧನೆ, ಸಂಶೋಧನೆ ಮತ್ತು ಮಾರ್ಗದರ್ಶನ ಕಾರ್ಯದಲ್ಲಿ  ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. (CASE) M.S. ಗುಜರಾತ್ ಬರೋಡಾ ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದರು. ಪ್ರಾಥಮಿಕ ಶಿಕ್ಷಣ ಮತ್ತು ಶಿಕ್ಷಕರು  ಸಾಮರ್ಥ್ಯಾಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ಕುರಿತ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪ್ರಸ್ತುತ ಇವರು ಗುಜರಾತ್, ಹಿಮಾಚಲ ಪ್ರದೇಶ. ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ತ್ರಿಪುರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಶಾಲಾ ಮುಖ್ಯಸ್ಥರ ಸಾಮರ್ಥ್ಯ ಅಭಿವೃದ್ಧಿ ಸಂಪನ್ಮೂಲ ತಂಡದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಡಾ.ಸಬೀತಾ.ಜಿ.ವಿ. ಮೆನನ್ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಿಂದ ತಮ್ಮ ಪಿ.ಎಚ್.ಡಿ ಪಡೆದಿದ್ದಾರೆ. ಶೈಕ್ಷಣಿಕ ಮನೋವಿಜ್ಞಾನದ ಬೋಧನಾ ವಿನ್ಯಾಸ ಮಾದರಿ ಅಭಿವೃದ್ಧಿಯ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯನಿರ್ವಹಿಸಿದ್ದಾರೆ. -ಕಲಿಕಾ ಗಣಕ ಯಂತ್ರ ಆಧಾರಿತ  ತರಬೇತಿಯ ಬೋಧನಾ ವಿನ್ಯಾಸಕಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರು  I.I.T.. ಮದ್ರಾಸ್ನಲ್ಲಿನ S.S.A. ಕಾರ್ಯಕ್ರಮದ ಅನುಷ್ಠಾನ ಮೇಲ್ವಿಚಾರಣೆ ಮತ್ತು ತಮಿಳು ನಾಡಿನ ಶಾಲೆಗಳಲ್ಲಿನ A.L.M. ಮೌಲ್ಯಮಾಪನ ಕಾರ್ಯದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಇವರು N.C.S.L.ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಅಸ್ಸಾಂ, ಕರ್ನಾಟಕ, ತೇಲಂಗಾಣ, ಓಡಿಶಾ, ಮತ್ತು ಪುದುಚೆರಿಗಳಲ್ಲಿನ ಶಾಲಾ ನಾಯಕತ್ವ ಕಾರ್ಯಕ್ರಮಗಳ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ.ಎನ್.ಮೈಥಿಲಿ ಇವರು ಪ್ರಸ್ತುತ N.C.S.L.ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ನಾಯಕತ್ವ ಮತ್ತು ನಿರ್ವಹಣೆ ಕುರಿತ  ಬೋಧನಾ ಕಾರ್ಯಕ್ರಮಗಳ ವಿನ್ಯಾಸ, ಕೆಲವು ರಾಜ್ಯಗಳಲ್ಲಿ ಶಾಲಾ ನಾಯಕತ್ವ ಸಾಮರ್ಥ್ಯ ಅಭಿವೃದ್ಧಿಯ ಕಾರ್ಯಕ್ರಮಗಳ ಅನುಷ್ಠಾನ, ಶಾಲಾ ನಾಯಕತ್ವದಲ್ಲಿ ಮಹಿಳೆಯರ ಕುರಿತಾದ ಸಂಶೋಧನೆ ಇವರ ಆಸಕ್ತಿಯ ಕ್ಷೇತ್ರವಾಗಿದೆ. ಕರ್ನಾಟಕದಲ್ಲಿ ಗ್ರಾಮೀಣ ಶಾಲೆಗಳಲ್ಲಿನ ಗುಣಮಟ್ಟದ ಕಾರ್ಯಕ್ರಮಗಳಲ್ಲಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. 12 ನೇ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿನ ಶಿಕ್ಷಕರ ಶಿಕ್ಷಣ ಪುನರ್ರಚನೆಯ ಕಾರ್ಯದಲ್ಲಿ ಸಂಶೋಧನೆ ನಡೆಸಿದ್ದಾರೆ. ಹಿಂದೆ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ, ಧಾರವಾಡದ ಶಿಸ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರಿನ ಅಜೀಂ ಪ್ರೇಮ್ಜಿ, TISS (ಮುಂಬೈ)ಗಳೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ಸಂಶೋಧನಾ ನಿಯತ ಕಾಲಿಕೆಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ. ಪ್ರಸ್ತುತ ಇವರು ಆಂಧ್ರ ಪ್ರದೇಶ, ಕೇರಳ, ಮೇಘಾಲಯ, ಮಣಿಪುರ ಮತ್ತು ಸಿಕ್ಕಿಂಗಳಲ್ಲಿ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುನ್ನೆಡೆಸುತ್ತಿದ್ದಾರೆ.

ಡಾ. ಚಾರು ಸ್ಮಿತಾ ಮಲ್ಲಿಕ್ ಇವರು N.I.E.P.A. N.C.S.L.ನಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯಿಂದ ಶೈಕ್ಷಣಿಕ ನೀತಿ, ಯೋಜನೆ ಮತ್ತು ಆಡಳಿತ ಎಂಬ ವಿಷಯದ ಮೇಲೆ ಪಿ.ಎಚ್.ಡಿ ಪಡೆದಿದ್ದಾರೆ. ಅವರ ಸಂಶೋಧನೆಯು ಉತ್ತರ ಪ್ರದೇಶದ ಪ್ರೌಢಶಾಲಾ ಹಂತದಲ್ಲಿ ಪ್ರವೇಶ ಮತ್ತು ಭಾಗವಹಿಸುವಿಕೆಯಲ್ಲಿನ ಸಮಾನ ಅವಕಾಶಗಳ ಕುರಿತಾಗಿದೆ. ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಸಮಾಜ ಶಾಸ್ತ್ರದಲ್ಲಿ J.N.U.ನಿಂದ ಪಡೆದಿದ್ದಾರೆ. ಇವರು ಶಾಲಾ ನಾಯಕತ್ವ ಕಾರ್ಯಕ್ರಮವನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ಕೇಂದ್ರದಲ್ಲಿ ತಂಡದೊಂದಿಗೆ ತೊಡಗಿಸಿಕೊಳ್ಳುವುದರ ಜೊತೆಗೆ ಬೋಧನಾ ಪ್ರಮಾಣ ಪತ್ರ ನೀಡುವ ಮತ್ತು ಶಾಲಾ ನಾಯಕತ್ವ ನಿರ್ವಹಣೆಯ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ್, ಹರಿಯಾಣ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್ದಲ್ಲಿನ ಶಾಲಾ ನಾಯಕತ್ವ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ನಾಯಕತ್ವ ಮತ್ತು ಶೈಕ್ಷಣಿಕ ಯೋಜನೆಗಳು ಅವರ ಆಸಕ್ತಿಯ ಕ್ಷೇತ್ರವಾಗಿದೆ.