ಕಾರ್ಯಕ್ರಮದ ತರಬೇತಿ ಪಡೆಯಲು ಪ್ರಯತ್ನಿಸುವ ಮೊದಲು ಸೂಚನೆಗಳನ್ನು ಓದಿ

  1. ಆನ್ಲೈನ್ ತರಬೇತಿ ಕಾರ್ಯಕ್ರಮದ ನೋಂದಣಿ ದಿನಾಂಕ ಮತ್ತು ದಾಖಲಾತಿ ದಿನಾಂಕದ ನಡುವೆ ಕೆಲವು ದಿನಗಳ ಅಂತರವಿರಬಹುದು. ಮೊದಲ ಸುತ್ತಿನ ನೋಂದಣಿಗೆ ಉದಾಹರಣೆಯನ್ನು ನೋಡೋಣ. ನೋಂದಣಿಯನ್ನು 10 ರಿಂದ 25 ಸೆಪ್ಟೆಂಬರ್ ಎಂದು ನೀಡಲಾಗಿದ್ದರೆ, ನೀವು 10 ರಿಂದ 25 ಸೆಪ್ಟೆಂಬರ್ ನಡುವಿನ ದಿನಾಂಕಗಳಲ್ಲಿ ಯಾವಾಗಾದರೂ ನೋಂದಾಯಿಸಬಹುದು. ಆದರೆ ಸೆಪ್ಟೆಂಬರ್ 10 ರಂದು ನೋಂದಣಿಯಾಗಿದೆ ಎಂದು 11 ರಂದು ಕೋರ್ಸ್ ಸೇರಲು ಸಾಧ್ಯವಿಲ್ಲ. ಕೋರ್ಸ್ ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ ಮತ್ತು 10 ಡಿಸೆಂಬರ್ ನಂದು ಕೊನೆಗೊಳ್ಳುತ್ತದೆ. ಒಟ್ಟಾರೆ ಕಾರ್ಯಕ್ರಮದ ಅವಧಿಯು ಎರಡುವರೆ ತಿಂಗಳದ್ದಾಗಿರುತ್ತದೆ.

  2. ಮೇಲೆ ನೀಡಲಾದ ಮೊದಲ ಸ್ಲಾಟ್ನಲ್ಲಿ ನೀವು ನೋಂದಾಯಿಸಲು ಸಾಧ್ಯವಾಗದಿದ್ದರೆ, N.C.S.L.ವೆಬ್ಸೈಟ್ ಪ್ರೋಗ್ರಾಂಗೆ ನೋಂದಣಿ ಸುತ್ತುಗಳನ್ನು ತೋರಿಸುತ್ತದೆ.

  3. ಕಾರ್ಯಕ್ರಮವು ಏಳು ಪ್ರಮುಖ ಕೋರ್ಸ್ಗಳನ್ನು ಹೊಂದಿದ್ದು, ನಿಮಗೆ ಸಹಾಯ ಮಾಡುವ ಸಲುವಾಗಿ ಇಡೀ ಕಾರ್ಯಕ್ರಮದ ಕಲಿಕೆಗಳನ್ನು ಕ್ರೋಢೀಕರಿಸುವುದು ಮತ್ತು ಶಾಲೆಯ ಅಭಿವೃದ್ಧಿಯನ್ನು ಮಾಡುವ ಒಂದು ಹೆಚ್ಚುವರಿ ಕೋರ್ಸ್ನ್ನು ಹೊಂದಿದೆ.

  4. ಕಾರ್ಯಕ್ರಮದ ಒಟ್ಟು ಅವಧಿ 30 ಘಂಟೆಗಳದ್ದಾಗಿದೆ (ಎರಡುವರೆ ತಿಂಗಳು)

  5. ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಹತ್ತು ವಾರಗಳ ಸಮಯವಿದ್ದು, ನೀವು ವಾರದಲ್ಲಿ ಕೇವಲ ಮೂರು  ಗಂಟೆಗಳ ಕಾಲ ವಿನಿಯೋಗಿಸಬೇಕಾಗುತ್ತದೆ.

  6. ವಾರಗಳಲ್ಲಿ ಪಡೆಯಬೇಕಾದ ಕೋರ್ಸ್ಗಳ ವಿವರಗಳನ್ನು ಕೋಷ್ಠಕ ರೂಪದಲ್ಲಿ ಕೆಳಗೆ ನೀಡಲಾಗಿದೆ. ಕೇವಲ ಎರಡು ಕೋರ್ಸ್ಗಳಲ್ಲಿ ನೀವು ಎರಡು ವಾರಗಳು ಅಥವಾ 6 ಗಂಟೆಗಳ ಕಾಲ ವಿನಿಯೋಗಿಸಬೇಕು (ಕೋರ್ಸ್ ಸಂಖ್ಯೆ 1 ಮತ್ತು ಕೋರ್ಸ್ ಸಂಖ್ಯೆ 3). ಉಳಿದ ಕೋರ್ಸ್ಗಳನ್ನು ಒಂದು ವಾರಗಳಲ್ಲಿ ಪೂರ್ಣಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ.


ಕೋರ್ಸ್ ಸಂಖ್ಯೆ

ಕೋರ್ಸ್ ಹೆಸರು

ಸಂಪರ್ಕ ಗಂಟೆಗಳು

ಒಳಗೊಂಡ ವಾರ

 

1

ಶಾಲಾನಾಯಕತ್ವದ ದೃಷ್ಠಿಕೋನಗಳು

3 ಘಂಟೆಗಳು

ಮೊದಲ ವಾರ

 

3 ಘಂಟೆಗಳು

ಎರಡನೇ ವಾರ

 

2

ಸ್ವಯಂ ಅಭಿವೃದ್ಧಿ

3 ಘಂಟೆಗಳು

ಮೂರನೇ ವಾರ

 

3

ಬೋಧನಾಕಲಿಕೆ ಪ್ರಕ್ರಿಯೆಯನ್ನು ಪರಿವರ್ತಿಸುವುದು

3 ಘಂಟೆಗಳು

ನಾಲ್ಕನೇ ವಾರ

 

3 ಘಂಟೆಗಳು

ಐದನೇ ವಾರ

 

4

ತಂಡಗಳ ರಚನೆ ಮತ್ತು ಮುನ್ನಡೆಸುವಿಕೆ    

3 ಘಂಟೆಗಳು

ಆರನೇ ವಾರ

 

5

ನಾವೀನ್ಯತೆಗಳನ್ನು ಮುನ್ನಡೆಸುವುದು

3 ಘಂಟೆಗಳು

ಏಳನೇ ವಾರ

 

6

ಪ್ರಮುಖ ಪಾಲುದಾರಿಕೆಗಳು (ಸಹಭಾಗಿತ್ವದ ಮುನ್ನಡೆಸುವಿಕೆ)

3 ಘಂಟೆಗಳು

ಎಂಟನೇ ವಾರ

 

7

ಶಾಲಾ ಆಡಳಿತ ಮುನ್ನಡೆಸುವುದು

3 ಘಂಟೆಗಳು

ಒಂಭತ್ತನೇ ವಾರ

 

8

ಕ್ರೋಢೀಕರಣ ಮತ್ತು ಶಾಲಾಭಿವೃದ್ದಿ ಯೋಜನೆ

3 ಘಂಟೆಗಳು

ಹತ್ತನೇ ವಾರ

 

 

30 ಘಂಟೆಗಳು

ಹತ್ತು ವಾರಗಳು     (ಎರಡುವರೆ ತಿಂಗಳುಗಳು)

 


7. ಪ್ರತಿಯೊಂದೂ ಕೋರ್ಸ್ ಪೂರ್ಣಗೊಂಡ ನಂತರ ನೀವು ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯೂ)  ಉತ್ತರಿಸಲು ಪ್ರಯತ್ನಿಸಬೇಕು.

8. ನೀವು ಎಲ್ಲಾ 8 ಕೋರ್ಸ್ಗಳ ಬಹು ಆಯ್ಕೆ ಪ್ರಶ್ನೆಗಳನ್ನು ಪೂರ್ಣಗೊಳಿಸಿದ ನಂತರ ಕಾರ್ಯಕ್ರಮ ಸಂಪೂರ್ಣವೆಂದು ಪರಿಗಣಿಸಲಾಗುತ್ತದೆ.

9. ಕಾರ್ಯಕ್ರಮದ ಪೂರ್ಣಗೊಳಿಸುವಿಕೆಯು N.C.S.L., N.I.E.P.A.ಯಿಂದ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಪ್ರಮಾಣ ಪತ್ರವನ್ನು ನಿಮ್ಮ ನೋಂದಾಯಿತ ಮೇಲ್ ಐಡಿ ಮೂಲಕ ನಿಮಗೆ ಕಳುಹಿಸಲಾಗುತ್ತದೆ.